Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
ಕೊರವಂಜಿ ಅಪರಂಜಿ ಪರಂಪರೆ

ಕೊರವಂಜಿ ಚಾರಿತ್ರಿಕ ಹಿನ್ನೆಲೆ

೧೯೪೨ರಿಂದ ಸತತವಾಗಿ ಇಪ್ಪತ್ತೈದು ವರ್ಷಗಳ ಕಾಲ ನಾಡಿನ ಹಾಸ್ಯರಸಿಕರನ್ನು ರಂಜಿಸಿದ ಕೊರವಂಜಿಯ ಹುಟ್ಟಿಗೆ ರಾ.ಶಿ. ಯವರೊಂದಿಗೆ ಒತ್ತಾಸೆಯಾಗಿ ನಿಂತವರು, ನಾ.ಕಸ್ತೂರಿಯವರು. ಸಮಾನ ಮನೋಧರ್ಮದ ಇವರಿಬ್ಬರ ಭೇಟಿ ಕನ್ನಡ ನಗೆ ಸಾಹಿತ್ಯಕ್ಕೆ ಒಂದು ಮಹತ್ವದ ಘಟನೆಯಾಗಿ ಪರಿಣಮಿಸಿತು. ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಆ ದಿನಗಳಲ್ಲಿ ಕಸ್ತೂರಿಯವರ ವಿದ್ಯಾರ್ಥಿ. ಲಕ್ಷ್ಮಣ್ ಚಿತ್ರಗಳು, ರಾ.ಶಿ., ಕಸ್ತೂರಿ, ಇವರುಗಳ ನಗೆಲೇಖನಗಳೊಂದಿಗೆ ೧೯೪೨ರ ಕಾಮನಹಬ್ಬದಂದು (ಮಾರ್ಚಿ ೧೮) ಜನ್ಮತಾಳಿದ ಕೊರವಂಜಿಗೆ ಆ ಯುದ್ಧದ ದಿನಗಳಲ್ಲೂ ಒಳ್ಳೆಯ ಭವಿಷ್ಯ ಇರುವ ಸೂಚನೆಗಳಿದ್ದವು. ಹೇಳಿಕೊಳ್ಳುವಂತಹ ಯಾವ ಹಾಸ್ಯಸಾಹಿತ್ಯವೂ ಇಲ್ಲದ ಆ ಕಾಲದಲ್ಲಿ ಸಹಜವಾಗಿಯೇ ನಾಡಿನ ಓದುಗರು ಕೊರವಂಜಿಯನ್ನು ಆದರದಿಂದ ಬರಮಾಡಿಕೊಂಡರು.

ಮುಂದೆ ಓದಿ...

ಜನವರಿ
ಸುದ್ದಿ ಸಂಚಯ

ಅಪರಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
  • ಅ. ರಾ. ಸೇ, ಆನಂದ, ಶಿವು (ಶಿವಕುಮಾರ್), ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
  • 28 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 16,000 ಪುಟಗಳ ನಗೆ ಸಾಹಿತ್ಯ.
  • ಸುಮಾರು 700 ಲೇಖಕರು ಬರೆದಿರುವ ಸುಮಾರು 4500 ಲೇಖನಗಳು

ಕೊರವಂಜಿಯ ಸಿ.ಡಿ. ಅವತರಣಿಕೆಯ ವಿಶೇಷಗಳು
  • ರಾಶಿ, ನಾ. ಕಸ್ತೂರಿ, ದಾಶರಥಿ, ಕೇಫ, ಸುನಂದಮ್ಮ, ಕೊಳ್ಳೇಗಾಲದ ರಾಮಾನುಜ ಇನ್ನೂ ಹತ್ತಾರು ಬರಹಗಾರರ ಕಚಗುಳಿ ಇಡುವ ಲೇಖನಗಳು
  • 25 ಸಂಪುಟಗಳಲ್ಲಿ ಪ್ರಕಟವಾದ ಸುಮಾರು 12,000 ಪುಟಗಳ ನಗೆ ಸಾಹಿತ್ಯ.
  • ಸುಮಾರು 700 ಲೇಖಕರು ಬರೆದಿರುವ ಸುಮಾರು 5000 ಲೇಖನಗಳು
  • ಪ್ರಸಿದ್ಧ ವ್ಯಂಗ್ಯಚಿತ್ರಕಾರರು ಬರೆದಿರುವ ಸುಮಾರು 1000 ಚಿತ್ರಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ...

Visitors
149016