Aparanji
ಇಪ್ಪತ್ತೈದು ವರ್ಷಗಳ ಕಾಲ ಕನ್ನಡ
ನಗೆ ರಸಿಕರನ್ನು ರಂಜಿಸಿ ಕಾಡಿಗೆ ತೆರಳಿದ ಕೊರವಂಜಿ, ಈಗ
ಅಪರಂಜಿಯಾಗಿ ಅಂತರ್ಜಾಲಕ್ಕೆ ಆಗಮಿಸಿದ್ದಾಳೆ. ಬರಮಾಡಿಕೊಳ್ಳಿ.
ಕೊರವಂಜಿ ಸಿ. ಡಿ. ಬಿಡುಗಡೆ ಮತ್ತು ಅಪರಂಜಿ ಅಂತರ್ಜಾಲ ತಾಣದ ಉದ್ಘಾಟನೆ

ಮೊನ್ನೆ ಮಾರ್ಚ್ ಇಪ್ಪತ್ತೇಳರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅದ್ಧೂರಿ ಸಮಾರಂಭವೊಂದು ನಡೆಯಿತು. ಕೊರವಂಜಿ ಮಾಸಪತ್ರಿಕೆಯ ೨೫ ವರ್ಷಗಳ ಎಲ್ಲಾ ಸಂಚಿಕೆಗಳನ್ನೊಳಗೊಂಡ ಸಿ.ಡಿ., ಹಾಗೂ ಅಪರಂಜಿ ಮಾಸಪತ್ರಿಕೆಯ ಅಂತರ್ಜಾಲ ತಾಣದ ಉದ್ಘಾಟನೆ ಇವುಗಳನ್ನು ಹಮ್ಮಿಕೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಶ್ರೀ ಎನ್. ರಾಮಾನುಜ ಅವರು ವಹಿಸಿದ್ದರು. ಸಮಾರಂಭಕ್ಕೆ ಆಗಮಿಸಿದ್ದ ಸಭಿಕರನ್ನು ಅಪರಂಜಿ ಪತ್ರಿಕೆಯ ಸಂಪಾದಕರಾದ ಶ್ರೀ ಎಂ. ಶಿವಕುಮಾರ್ ಸ್ವಾಗತಿಸಿದ ನಂತರ, ಮಾನ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಸಿ.ಡಿ. ಯನ್ನು ಬಿಡುಗಡೆ ಮಾಡಿದರು. ಅಂತರ್ಜಾಲ ತಾಣದ ಉದ್ಘಾಟನೆಯನ್ನು ಕೆನರಾ ಬ್ಯಾಂಕಿನ ನಿರ್ವಾಹಕ ನಿರ್ದೇಶಕರಾದ ಶ್ರೀ ಜಗದೀಶ ಪೈ ಅವರು ನೆರವೇರಿಸಿದರು. ಸರ್ವಶ್ರೀ ಮನು ಬಳಿಗಾರ್, ಅ.ರಾ.ಮಿತ್ರ, ಗುರುರಾಜ ಕರ್ಜಗಿ ಹಾಗೂ ಶ್ರೀನಿವಾಸ ವೈದ್ಯ ಇವರುಗಳ ಚೇತೋಹಾರಿ ಮಾತುಗಳು ಸಭಿಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಅಪರಂಜಿ ಮಾಸಪತ್ರಿಕೆಯ ಉಪ ಸಂಪಾದಕರಾದ ಶ್ರೀ ಬೇಲೂರು ರಾಮಮೂರ್ತಿಯವರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯಕ್ರಮವನ್ನು ನಡೆಸಲು ಸಹಾಯ ಹಸ್ತ ನೀಡಿದ ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳಿಗೆ ಅಪರಂಜಿ ಬಳಗದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.

image
image
image
image
image
image
image
ಅಪರಂಜಿ ಕಿಡಿ
ಪ್ರಕಾಶ್

ಮೊದಲ ಮಾತು
ಶಿವಕುಮಾರ್

ನಮ್ಮನಮ್ಮಲ್ಲಿ
ಎಂ ಶಿವಕುಮಾರ್

ಕೊನೆಯ ನಮಸ್ಕಾರ
ಎನ್ ರಾಮಾನುಜ

ಒಂದು ಹೊಸ ಅನುಭವ
ಉಲ್ಲಾಸ ರಾಯಸಂ ಬೀಚಿ

ಚಪಾತಿಯ ತಪಾಸಣೆ
ನಂದಿನಿ ಕಾಪಡಿ

ಇಂಗು (ಚಾಕೋಲೇಟ್) ತಿಂದ...
ಡಿ. ವಿ. ಗುರುಪ್ರಸಾದ್

ಲಾಫಿಂಗ್ ಕ್ಲಬ್
ಸಿ. ಆರ್. ಸತ್ಯ

ಬೆನ್ನ ಹಿಂದೆ ಆಡಿಕೊಳ್ಳುವವರ...
ಗಂಗಾವತಿ ಪ್ರಾಣೇಶ್

ಸದನದಲ್ಲಿ ಪಟೇಲರು
ಬೇಲೂರು ರಾಮಮೂರ್ತಿ

ನಾ. ಕಸ್ತೂರಿಯವರನ್ನು ಮರೆತರೇ
ಡಾ. ಪ್ರಭುಪ್ರಸಾದ್

ಹಪ್ಪಳದ ಕಥೆ
ಅನಿತಾ ನರೇಶ್ ಮಂಚಿ

ಮರೆವಾಗಿ ಕಾಡಿತ್ತು ಮಾಯೆ
ಗಾಯಿತ್ರಿ ಮೂರ್ತಿ

ಸ್ವರ್ಗದಲ್ಲಿ ಚುನಾವಣೆ
ಪಾಲಹಳ್ಳಿ ವಿಶ್ವನಾಥ್

ವ್ಯಂಗ್ಯ ಮೆಲುಕು
ಪ್ರಕಾಶ್ ಶೆಟ್ಟಿ

ಹೆಂಡ್ತೀನ ದತ್ತು ತಗೋತಾರೇನ....
ಪ್ರಶಾಂತ್ ಅಡೂರ್

ಐ.ಪಿ.ಎಲ್. ದಾರಿಯಲ್ಲಿ ಯು ಟರ್ನ್
ಇ. ಆರ್. ರಾಮಚಂದ್ರನ್

ತುಂತುರು
ದಂನಆ

ಮಂಗ ದೇಶ
ದಿವಾಕರ್

ಬಿಂ. ಗೋ. ಜನಕರ ಜೊತೆ ಪ್ರಯಾಣ
ಶಾಮಲಾ ರವಿಶಂಕರ್

ಫೋನ್ ರಿಂಗ್ ಆದಾಗ
ನುಗ್ಗೆಹಳ್ಳಿ ಪಂಕಜ

ಮಾತಿನ ಮಲ್ಲರು
ಭುವನೇಶ್ವರಿ ಹೆಗಡೆ

ಗಂಡನ ಹಾ(ಪಾ)ಡು
ಎಚ್ ಡುಂಡಿರಾಜ್

ಗುಂಡಣ್ಣ ಕನ್ಯೆ ನೋಡಿದ್ದು
ಕುಮುದಾ ಪುರುಷೋತ್ತಮ್

ಶುಭ ಶಕುನ
ಎಂ. ಎಸ್. ನರಸಿಂಹಮೂರ್ತಿ

ಸಿಂಪಲ್ಲಾಗಿರೋದು
ಹ.ಶಿ. ಭೈರನಟ್ಟಿ

ನಾನು ಹಿಂಗೇನೇ
ಸಹನಾ ಪ್ರಸಾದ್

ಜೀವನ ಮೌಲ್ಯಗಳು
ಗಣೇಶ ಹೆಗ್ಗಡೆ

ಬೆಳ್ಳಗಿರುವುದೆಲ್ಲಾ ಹಾಲಲ್ಲ
ಜಿ. ವಿ. ನಿರ್ಮಲ

ಸ್ಯಾರಿ ಸೆಲೆಕ್ಷನ್ನೂ...
ಶರತ್ ಕಲ್ಕೋಡ್

ಗಾದೆಗಳ ಹೊಸ ನೆಟ್ಟಾವತಾರಗಳು
ಆಂಡಾಳ್ ಶರ್ಮ

ಮಾರ್ಜಾಲ ಮುನಸು
ನಂ. ನಾಗರಾಜ್

ಸೀರಿಯಲ್ ಸತ್ಯಗಳು
ಆನಂದ

ಸದ್ಬಳಕೆ
ಕೃಷ್ಣ ಸುಬ್ಬರಾವ್

ಒಂದು ಚುಕ್ಕಿಯ ಸುತ್ತ
ಎನ್. ರಾಮನಾಥ್

ಪೂರ್ವಜನ್ಮ ಸುಕೃತ
ಎಚ್ . ಗೋಪಾಲಕೃಷ್ಣ

ಹೀಗಾಗಬಾರದಾಗಿತ್ತು
ಗೌತಮ

ಬೈಗುಳ ಮಹಿಮೆ
ವೈ. ಎನ್. ಗುಂಡೂರಾವ್

ಮ್ಯಾಚಿಂಗ್ ಮ್ಯಾಚಿಂಗ್
ವಿ. ಪ್ರಾಣೇಶ್ ರಾವ್

...ವಾಟ್ಸ್ ಡೌನ್ ಆಪ್
ತುರುವೇಕರೆ ಪ್ರಸಾದ್

ಗಡಿಬಿಡಿ ಗುಂಡ
ವಿಜಯ ಗುರುರಾಜ

ಊಟದ ಮಾಟ
ಜಯಕುಮಾರ್ ಮರಿಯಪ್ಪ